ಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಕನ್ನಡ ಮಾಸಿಕದ ಸಂಚಿಕೆಗಳು


"ಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಕನ್ನಡ ಮಾಸಿಕದ ಸಂಚಿಕೆಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ‍!. ಈ ಕಾರ್ಯಕ್ಕೆ ಆಸಕ್ತರು, ಪುಸ್ತಕಗಳನ್ನು ಹೊಂದಿರುವವರು, ನಮ್ಮ ತಾಂತ್ರಿಕ ಕೆಲಸಗಳಿಗೆ ಸಹಕರಿಸುವವರು, ಯಾರು ಬೇಕಾದರೂ ಕೈ ಜೋಡಿಸಬಹುದು. ಸಂಪರ್ಕಿಸಿ [email protected]

ಡಿ.ಎಸ್.ನಾಗಭೂಷಣ
(1952-2022) ಪರಿಚಯ

ಶ್ರೀ ಡಿ.ಎಸ್ ನಾಗಭೂಷಣ ಕನ್ನಡದ ಓದುಗರಿಗೆ ಕುವೆಂಪು, ಮಾಸ್ತಿ, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶರೊಟ್ಟಿಗೆ ಗಾಂಧಿ, ಲೋಹಿಯಾ, ಜೆ.ಪಿ. ಮತ್ತು ಅಂಬೇಡ್ಕರರನ್ನಲ್ಲದೇ ರಮಣ ಮಹರ್ಷಿಗಳನ್ನೂ ಪರಿಚಯಿಸಿದ ಹಿರಿಯ ಲೇಖಕರು. ಹಾಗೇ ಹತ್ತು ವರುಷಗಳ ಕಾಲ 'ಹೊಸ ಮನುಷ್ಯ' ಎಂಬ ಸಮಾಜವಾದಿ ಮಾಸಿಕ ಹೊರ ತಂದವರು. ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನದ ಮೂಲಕ ಈ ಜಾಗತೀಕರಣದ ದಿನಗಳಲ್ಲಿ ಸಮಾಜವಾದಿ ತತ್ವಗಳನ್ನು ಪುನರ್ ನಿರೂಪಿಸಿದ ಚಿಂತಕರು. ಇವರ ಮೇರು ಕೃತಿ 'ಗಾಂಧಿ ಕಥನ'( 2019) ಇಪ್ಪತ್ತೈದನೆಯ ನೇ ಮುದ್ರಣದತ್ತ ದಾಪುಗಾಲಿಡುತ್ತಿದ್ದು 2021 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿದೆ.

See also :

Sanchaya

Filter by :